
ಜಿ.ಎಸ್. ಶಿವರುದ್ರಪ್ಪನವರು ಬರೆದ ಒಂದು ಅದ್ಭುತ ಸಾಲಿದೆ , “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ.. ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಿಮ್ಮೊಳಗೆ…” ಈ ಜೀವನ ಅನ್ನೋದೇ ಹೀಗೆ.. ಕಣ್ಣ ಮುಂದೇನೇ ನಮ್ಮೆಲ್ಲಾ ಸಂಬಂಧ- ಬಾಂಧವ್ಯಗಳು ಇದ್ದರೂ, ಅದರ ಹುಡುಕಾಟದಲ್ಲೇ ಎಲ್ಲವೂ ಕೊನೆಯಾಗುತ್ತವೆ.. ಎಷ್ಟೋ ಬಾರಿ ನಮ್ಮವರು ಅನ್ನಿಸಿಕೊಂಡೋರೇ ನಮ್ಮವರಾಗಿರೊಲ್ಲ.. ಆದರೆ ಯಾರೋ ಅಪರಿಚಿತರು ಬದುಕಿನ ಮರೆಯಲಾರದ ಪಾತ್ರವಾಗಿ ಬಿಡುತ್ತಾರೆ… ರಕ್ತ ಸಂಬಂಧ, ಕರುಳ ಸಂಬಂಧ ಇವುಗಳೆಲ್ಲವುಗಳಿಂದ ಹೊರತು ಪಡಿಸಿದ ಬಾಂಧವ್ಯವೊಂದು ಯಾವುದೋ ಕಂಡರಿಯದ ಎಳೆಯಲ್ಲಿ ನಮ್ಮನ್ನು ಇನ್ನೊಬ್ಬರೊಂದಿಗೆ ಕಟ್ಟಿ ಹಾಕಿ ಬಿಡುತ್ತವೆ.. ಅನೇಕ ಬಾರಿ ಅವು ನಮ್ಮ ಅನುಭವಕ್ಕೇ ಬರಲಾರದು…
ಪ್ರತೀ ದಿನ ಕಾಲೇಜಿಗೆ ಹೋಗುವಾಗ ಬಾಗಿಲ ಮರೆಯಿಂದ ಇಣುಕಿ ನೋಡುವ ಮುದ್ದು ಮಗು ಒಂದು ದಿನ ಕಾಣದಿದ್ದರೂ ಮನಸಿಗ್ಯಾಕೋ ಕಸಿವಿಸಿಯೆನಿಸುತ್ತದೆ.. ಮಣಭಾರದ ಬ್ಯಾಗ್ ಹೊತ್ತು ಬಸ್ಸನ್ನೇರಿ ಮುಗುಳ್ನಗು ಬೀರುವ ಪುಟ್ಟ ಹುಡುಗ ಬಸ್ಸಿನಲ್ಲಿ ಇರದಿದ್ದಾಗ ತಳಮಳವಾಗುತ್ತದೆ… ಎಂದೋ ತಲೆ ಸವರಿ ವಾತ್ಸಲ್ಯ ತೋರಿದ ಅಪರಿಚಿತ ಅಜ್ಜಿ, ದೇವಸ್ಥಾನದ ಹಿಂಬಾಗಿಲ ಬಳಿ ಕುಳಿತು ತನ್ನ ಮಗುವಿಗೆ ತುತ್ತು ತಿನ್ನಿಸುವ ಭಿಕ್ಷುಕಿ ಕಾರಣವಿಲ್ಲದೇನೇ ಪದೇ ಪದೇ ನೆನಪಾಗುತ್ತಾರೆ.. ಅಷ್ಟಕ್ಕೂ ಇವರ್ಯಾರ ಜೊತೆಗೆ ಒಂದು ಬಾರಿನೂ ಮಾತಾಡಿರೊಲ್ಲ.. ಆದರೂ ನೆನಪಿನ ಬುತ್ತಿಯೊಳಗೆ ಬೆಚ್ಚಗೆ ಕುಳಿತಿರುತ್ತಾರೆ… ಅಪರಿಚಿತರಾಗಿದ್ದರೂ ಒಂದು ಹಿರೀ ಜೀವದ ವಾತ್ಸಲ್ಯದ ನೋಟ, ಮುಗ್ಧ ಮಗುವಿನ ಮೃದು ಬೆರಳುಗಳ ಸ್ಪರ್ಶ, ಸಮವಯಸ್ಕರ ಸಾಂತ್ವನ ಅವರೊಂದಿಗೆ ಅವಿನಾಭಾವ ಸಂಬಂಧವೊಂದನ್ನು ಹುಟ್ಟಿಸಿ ಬಿಡುತ್ತದೆ…
ಹುಟ್ಟಿದಾಗ ಒಂದು ಮಗುವಿಗೆ ಮೊದಲಾಗಿ ತನ್ನ ತಾಯಿ ಪರಿಚಯವಾಗುತ್ತಾಳೆ.. ಬಳಿಕ ಸಾಯುವವರೆಗಿನ ಅವಧಿಯವರೆಗೂ ನಮ್ಮ ಬದುಕಿನೊಳಗೆ ಅದೆಷ್ಟೋ ಪಾತ್ರಗಳು ಕಾಲಿಡುತ್ತವೆ.. ಕೆಲವೊಂದು ಪಾತ್ರಗಳು ಬಂದ ವೇಗದಲ್ಲೇ ಹೊರಟು ಹೋದರೆ, ಇನ್ನೂ ಕೆಲವು ಅಂತ್ಯದವರೆಗೂ ಜೊತೆಗೇ ಇರುತ್ತವೆ.. ಇನ್ನೂ ಕೆಲವುಗಳು ಹೊರಟು ಹೋದರೂ ಬರುವಿಕೆಯ ಹೆಜ್ಜೆ ಗುರುತುಗಳನ್ನು ನೆನಪಾಗಿ ಉಳಿಸಿರುತ್ತಾರೆ.. ಇಂಥಹವರಲ್ಲಿ ಅನೇಕರು ಕಡೇವರೆಗೂ ಅನಾಮಿಕರಾಗಿಯೇ ಇದ್ದುಬಿಡುತ್ತಾರೆ….
ಇಂದು ನಾವು ಜಾತಿ, ಧರ್ಮ, ಸಂಪ್ರದಾಯ, ಘನತೆಗಳೆಂಬ ಬೇಲಿಗಳನ್ನು ನಮ್ಮ ಸುತ್ತ ನಾವೇ ಕಟ್ಟಿಕೊಂಡು ಸನಿಹಕ್ಕೆ ಬರಲು ತವಕಿಸುತ್ತಿರುವ ಸ್ನೇಹ-ಅನುಬಂಧಗಳನ್ನು ದೂರ ತಳ್ಳುತ್ತೇವೆ.. ನಮಗೆ ಅಪರಿಚಿತರು ಎನ್ನಿಸುವ ಅನಾಮಿಕರೇ ಅನೇಕ ಬಾರಿ ನಮ್ಮ ಜೀವನದ ಬದಲಾವಣೆಗೆ ಕಾರಣರಾಗಿ ಬಿಡುತ್ತಾರೆ.. ಹಾಗೊಂದು ವೇಳೆ ಅವಲೋಕಿಸಿದ್ದೇ ಆದಲ್ಲಿ ಪ್ರತಿಯೊಬ್ಬರ ನಡೆ-ನುಡಿಯಲ್ಲಿ ಅವರು ಕಂಡ ಅನಾಮಿಕರೊಬ್ಬರ ಪ್ರಭಾವ ಸ್ವಲ್ಪವಾದರೂ ಇದ್ದೇ ಇರುತ್ತದೆ..
ಒಂದು ಕ್ಷಣ ಮೌನವಾಗಿ ಯೋಚಿಸಿದಾಗ ಇಂಥಹ ಹತ್ತು ಹಲವಾರು ಪಾತ್ರಗಳು, ಸಂಬಂಧಗಳು ಕಣ್ಣ ಮುಂದೆ ಸುಳಿಯುತ್ತವೆ.. ಒಂದು ಕ್ಷಣವೂ ಬಿಡುವಿಲ್ಲದಿರುವ ನಮ್ಮ ಬದುಕಲ್ಲಿ ಇಂಥಹ ಅನಾಮಿಕರ ಬಗೆಗೆ ಗಮನವೇ ಹರಿಸಿರುವುದಿಲ್ಲ.. ಎಂದೋ ನೆನಪಾದಾಗ ಈ ತರಹದ ಕೆಲವು ಅನಾಮಿಕ ಸಂಬಂಧಗಳು ತುಟಿಯಂಚಿನಲ್ಲಿ ನಗುವರಳಿಸಿದರೆ, ಇನ್ನೂ ಕೆಲವು ಕಣ್ಣಂಚನ್ನು ಒದ್ದೆಯಾಗಿಸುತ್ತವೆ.. ನಿಮ್ಮ ಜೀವನದಲ್ಲೂ ಇಂಥಹ ಅನೇಕ ಪಾತ್ರ- ಸಂಬಂಧಗಳು ಹಾದುಹೋಗಿರಬಹುದು.. ಒಂದು ಬಾರಿ ನಿಮ್ಮ ಬದುಕಿನ ಪುಟಗಳನ್ನೂ ತಿರುವುತ್ತಾ ಹೋಗಿ.. ಸಿಕ್ಕೇ ಸಿಗುತ್ತಾರೆ….

ರಾಜ್ಯೋತ್ಸವದ ಕೊಡುಗೆ… ತುಂಬಾ ಚನ್ನಾಗಿದೆ..
ತುಂಬಾ ಮೆಚ್ಯೂರ್ಡ್ ಬರಹ. ಬರೆಯುತ್ತಾ ಬರೆಯುತ್ತಾ ಮಾಗುತ್ತಿದ್ದೀರಿ. ಕಂಗ್ರಾಟ್ಸ್. ಬರೆಯುತ್ತಿರಿ.
ಅರಿಯದೇ ಆಪ್ತರೆನಿಸುವ ಅನಾಮಿಕರು…!
thumba chennagide putta..
thank u so much Praveen anna, Ranjith anna & ruth akka… thank u so much…..
putta chennaagide……
ninu “ello hudukide illada devara……..” ah salu oduttiddante ondusannivesha nenapayitu……. adu adipaaya hakidde tada… nUraaru anaamikaru, baandhavyagalu nenapina buttiyalli chukkigalante holeyuttaa hoyitu…. gr8 one.. keep it up..
-Inchara
thanks akka… nija aa saalugale saavira artha needutte… thanks for ur wishes akka….
Hi amritavarshini
You are a good social worker i think..you have kind heart.. please keep it up..
Thank u Ramesh…
thumba Chennagidhe, wat a Feel, i like it, , , .
ಪ್ರತೀ ದಿನ ಕಾಲೇಜಿಗೆ ಹೋಗುವಾಗ ಬಾಗಿಲ ಮರೆಯಿಂದ ಇಣುಕಿ ನೋಡುವ … ???
Nice Nice Nice…………………
Good thoughts…
ello hudukide illada devara !!!
tumba chennagide….
baraha kettadaagenu illa…
haagaagi baykollo prasanga illa!!!!!(orkut nalli barkondidiralla!!!!)
nice…..
really nice one….namma sutallu idrru..kuda illa anta huduktivi..adke priti ge kone illa…